Saturday, October 10, 2009

ನನ್ನಳೊಗಿನ ಕುಡುಕ
ಕೆಲವೊಮ್ಮೆ ಕವಿ
ಮತ್ತೊಮ್ಮೆ ಬುದ್ದಿ ಜೀವಿ..

ನನ್ನಳೊಗಿನ ಕುಡುಕ
ಆಗುತ್ತಾನೆ ತತ್ವ ಜ್ಞಾನಿ
ವಿಶಿಷ್ಟ ಯೋಚನೆಗಳ ವಿಜ್ಞಾನಿ...

ನನ್ನಳೊಗಿನ ಕುಡುಕ
ತಿರುಗಾಟ ಬಯಸುವ ಅಲೆಮಾರಿ
ಒಂದ್ಹೆಜ್ಜೆ ಮುಂದಿಡಲೂ ಬೇಡದ ಸೋಮಾರಿ...

ನನ್ನಳೊಗಿನ ಕುಡುಕ
ಒಬ್ಬ ಅಪ್ಪಟ ಪ್ರೇಮಿ
ನೈತಿಕತೆಯ ಅರಿವೇ ಇಲ್ಲದ ಕಾಮಿ...

ನನ್ನಳೊಗಿನ ಕುಡುಕ
ಅವನಿಗದೆಷ್ಟು ಮುಖ
ನನಗೊಂದೆ ದು:ಖ
ನನಗಿಲ್ಲದೆ ಹೋಯಿತೆ ಅವನಿಗಿರುವ ಸುಖ..

No comments: